ಮುಕ್ತ ಅಭಿವ್ಯಕ್ತಿಯನ್ನು ರಕ್ಷಿಸಿ ಮತ್ತು ಓಪನ್ ಸೋರ್ಸ್ ಗೌಪ್ಯತೆ ತಂತ್ರಜ್ಞಾನದ ಮೂಲಕ ಸುರಕ್ಷಿತ ಜಾಗತಿಕ ಸಂವಹನವನ್ನು ಸಶಕ್ತಗೊಳಿಸಿ.
ನಮ್ಮ ಪ್ರಮುಖ ಉತ್ಪನ್ನ, Signal ಮೆಸೆಂಜರ್‌ನೊಂದಿಗೆ, ನಾವು ಬಳಕೆದಾರರ ಗೌಪ್ಯತೆಯನ್ನು ಗೆಲ್ಲುವುದು ಎಂದರೆ ನಿಮ್ಮ ಡೇಟಾವನ್ನು "ಜವಾಬ್ದಾರಿಯಿಂದ" ನಿರ್ವಹಿಸುವುದಕ್ಕಿಂತಲೂ ಹೆಚ್ಚಾಗಿ, ನಾವೇ ಸೇರಿದಂತೆ ಯಾರ ಕೈಗೂ ಸಿಗದಂತೆ ನೋಡಿಕೊಳ್ಳುವುದು ಎಂದು ನಾವು ನಂಬುತ್ತೇವೆ.
ಮುಕ್ತ ಮೂಲ ಸಮುದಾಯದ ಬದ್ಧ ಸದಸ್ಯರಾಗಿ, ನಾವು ನಮ್ಮ ತಂತ್ರಜ್ಞಾನವನ್ನು ಪ್ರಕಟಿಸುತ್ತೇವೆ ಮತ್ತು ಇತರ ಕಂಪನಿಗಳು ತಮ್ಮ ಸ್ವಂತ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಅದನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಜ್ಞಾನವನ್ನು ಹಂಚಿಕೊಳ್ಳುತ್ತೇವೆ.
Signal ಫೌಂಡೇಶನ್ ಒಂದು 501c3 ಲಾಭರಹಿತ ಸಂಸ್ಥೆಯಾಗಿದೆ. ನಾವು ಆ ಪದನಾಮದ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ಲಾಭರಹಿತ ಸಂಸ್ಥೆ ಕೂಡಾ ಲಾಭೋದ್ದೇಶದಿಂದ ನಡೆಸಲ್ಪಡುವ ಯಾವುದೇ ವ್ಯಾಪಾರದಂತೆಯೇ ನಾವೀನ್ಯತೆ ಮತ್ತು ಗಾತ್ರದಲ್ಲಿ ಸ್ಪರ್ಧೆಯೊಡ್ಡಬಹುದು ಎಂಬುದನ್ನು ಸಾಬೀತುಪಡಿಸಲು ನಾವು ಹೊರಟಿದ್ದೇವೆ.
2012 ರಲ್ಲಿ ಆರಂಭಗೊಂಡ Signal ಮೆಸೆಂಜರ್ ಅನ್ನು ಬೆಂಬಲಿಸಲು 2018 ರಲ್ಲಿ Signal ಫೌಂಡೇಶನ್ ರಚನೆಗೊಂಡಿತು. ಈ ಫೌಂಡೇಶನ್ ಮೂಲಕ, Signal ನ ಪ್ರಗತಿ ಮತ್ತು ಚಾಲ್ತಿಯಲ್ಲಿರುವ ಕಾರ್ಯಾಚರಣೆಗಳನ್ನು ಬೆಂಬಲಿಸಲು ಹಾಗೂ ಖಾಸಗಿ ಸಂವಹನದ ಭವಿಷ್ಯವನ್ನು ಅಧ್ಯಯನ ನಡೆಸಲು ನಮಗೆ ಸಾಧ್ಯವಾಗಿದೆ.
Signal ಎಂಬುದು ಒಂದು ಲಾಭ ರಹಿತ ಸಂಸ್ಥೆಯಾಗಿದ್ದು, ಜಾಹೀರಾತುದಾರರು ಅಥವಾ ಹೂಡಿಕೆದಾರರನ್ನು ಹೊಂದಿಲ್ಲ, ಕೇವಲ ಬಳಸುವ ಮತ್ತು ಅದನ್ನು ಮೌಲ್ಯಯುತಗೊಳಿಸುವ ಜನರಿಂದ ಉಳಿದುಕೊಂಡಿದೆ.
ನಾವು Signal ಮೆಸೆಂಜರ್‌ನ ಮಾತೃಸಂಸ್ಥೆಯಾಗಿ Signal ಫೌಂಡೇಶನ್ ಅನ್ನು ರಚಿಸಿದ್ದೇವೆ, ಏಕೆಂದರೆ ಮುಂದೊಂದು ದಿನ ಒಂದೇ ಗುರಿಗೆ ಏರುವ ಗೌಪ್ಯತೆಯನ್ನು ಸಂರಕ್ಷಿಸುವ ಇತರ ಯೋಜನೆಗಳನ್ನು ಉತ್ತೇಜಿಸಲು ನಾವು ಬಯಸುತ್ತೇವೆ.
Signal ಮೆಸೆಂಜರ್ ಅನ್ನು ವಿಶ್ವದಾದ್ಯಂತ ಲಕ್ಷಾಂತರ ಮಂದಿಗೆ ಉಚಿತ ಆ್ಯಪ್ ಅನ್ನು ಒದಗಿಸಲು ಸಮುದಾಯದ ಬೆಂಬಲವನ್ನು ನಾವು ಅವಲಂಬಿಸಿದ್ದೇವೆ. ಈ ಉದ್ದೇಶವನ್ನು ನೀವು ಬೆಂಬಲಿಸುತ್ತೀರಾ?
ಅಂಬಾ ಕಾಕ್ ಅವರು ದಶಕಗಳ ಕಾಲ ಬಹುರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರಿ ನಿಯಂತ್ರಕರು, ಉದ್ಯಮ, ನಾಗರಿಕ ಸಮಾಜದ ಸಂಸ್ಥೆಗಳು ಮತ್ತು ಲೋಕೋಪಕಾರಿಗಳಿಗೆ ಸಲಹೆ ನೀಡುವ ದಶಕಗಳ ಅನುಭವ ಹೊಂದಿರುವ ಒಬ್ಬ ವಕೀಲರು ಮತ್ತು ತಂತ್ರಜ್ಞಾನ ನೀತಿ ಪರಿಣಿತರಾಗಿದ್ದಾರೆ. ಆಕೆಯು ಪ್ರಸ್ತುತ ನ್ಯೂಯಾರ್ಕ್‌ನ ಮುಂಚೂಣಿ ನೀತಿ ಸಂಶೋಧನಾ ಸಂಸ್ಥೆಯಾಗಿರುವ AI Now Institute ನ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ ಮತ್ತು ನಾರ್ತ್‌ಈಸ್ಟರ್ನ್ ಯುನಿವರ್ಸಿಟಿಯ ಸೈಬರ್ ಸೆಕ್ಯೂರಿಟಿ ಆಂಡ್ ಪ್ರೈವೆಸಿ ಇನ್‌ಸ್ಟಿಟ್ಯೂಟ್‌ನ ಹಿರಿಯ ಸಹವರ್ತಿಯಾಗಿದ್ದಾರೆ.
ಅಂಬಾ ಅವರು ಯುಎಸ್ ಫೆಡರಲ್ ಟ್ರೇಡ್ ಕಮಿಶನ್‌ನಲ್ಲಿ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ, ಆ ವೇಳೆ ಅವರು ಪ್ರಮುಖ ತಂತ್ರಜ್ಞಾನ ವಿಷಯಗಳ ನಿಯಂತ್ರಕರಿಗೆ ಸಲಹೆ ನೀಡಿದ್ದರು. AI Now ಗಿಂತ ಮುನ್ನ, ಅಂಬಾ ಅವರು Mozilla ದಲ್ಲಿ ಜಾಗತಿಕ ನೀತಿ ಸಲಹೆಗಾರರಾಗಿದ್ದರು, ಅಲ್ಲಿ ಅವರು ಡೇಟಾ ಗೌಪ್ಯತೆ ಕಾನೂನುಗಳು ಮತ್ತು ಏಷ್ಯಾ ಪೆಸಿಫಿಕ್ ಪ್ರಾಂತ್ಯ ಮತ್ತು ಅದರಿಂದಾಚೆಗೆ ನೆಟ್‌ವರ್ಕ್ ತಟಸ್ಥತೆಯಂತಹ ವಿಷಯಗಳಲ್ಲಿ ಸಂಸ್ಥೆಗಳ ಪ್ರಮುಖ ಸ್ಥಾನಗಳನ್ನು ಅಭಿವೃದ್ಧಿಪಡಿಸಿದರು ಮತ್ತು ಮುನ್ನಡೆಸಿದರು. ಆಕೆ ಪ್ರಸ್ತುತ Mozilla ಫೌಂಡೇಶನ್‌ನಲ್ಲಿ ಆಡಳಿತ ಮಂಡಳಿಯ ನಿರ್ದೇಶಕರ ಸಮಿತಿಯಲ್ಲಿದ್ದಾರೆ. ಅಂಬಾ ಅವರು ಭಾರತದ ನ್ಯಾಶನಲ್ ಯುನಿವರ್ಸಿಟಿ ಆಫ್ ಜ್ಯುರಿಡಿಶಿಯಲ್ ಸೈನ್ಸಸ್‌ನಿಂದ ಬಿಎ ಎಲ್ಎಲ್‌ಬಿ (ಆನರ್ಸ್) ಪೂರೈಸಿದ್ದರು. ಆಕೆ ರೋಡ್ಸ್ ಸ್ಕಾಲರ್ ಆಗಿ ಭಾಗವಹಿಸಿದ್ದ ಯುನಿವರ್ಸಿಟಿ ಆಫ್ ಆಕ್ಸ್‌ಫರ್ಡ್‌ನಲ್ಲಿ ಸೋಶಿಯಲ್ ಸೈನ್ಸ್ ಆಫ್ ದಿ ಇಂಟರ್ನೆಟ್‌ನಲ್ಲಿ ಮಾಸ್ಟರ್ಸ್ ಇನ್ ಲಾ (ಬಿಸಿಎಲ್) ಮತ್ತು ಎಂಎಸ್‌ಸಿ ಪೂರೈಸಿದ್ದರು.
ಬ್ರಿಯಾನ್ ಆಕ್ಟನ್ ಅವರೊಬ್ಬ ಉದ್ಯಮಿ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ಆಗಿದ್ದು, 2009ರಲ್ಲಿ ಮೆಸೇಜಿಂಗ್ ಆ್ಯಪ್ WhatsApp ಅನ್ನು ಸಹಸಂಸ್ಥಾಪಿಸಿದ್ದರು. 2014ರಲ್ಲಿ ಆ ಆ್ಯಪ್ Facebook ಗೆ ಮಾರಾಟಗೊಂಡ ಬಳಿಕ, ಗ್ರಾಹಕ ದತ್ತಾಂಶ ಬಳಕೆ ಮತ್ತು ಉದ್ದೇಶಿತ ಜಾಹೀರಾತಿನ ಕುರಿತು ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ಲಾಭರಹಿತ ಉದ್ಯಮದತ್ತ ತಮ್ಮ ಪ್ರಯತ್ನಕ್ಕಾಗಿ ಗಮನಹರಿಸಲು ಅವರು ಆ ಕಂಪನಿ ತೊರೆದರು. 2018ರ ಫೆಬ್ರವರಿಯಲ್ಲಿ, ಆಕ್ಟನ್ ಅವರು ಮಾಕ್ಸಿ ಮಾರ್ಲಿನ್‌ಸ್ಪೈಕ್ ಅವರೊಂದಿಗೆ ಸೇರಿಕೊಂಡು Signal ಫೌಂಡೇಶನ್ ಅನ್ನು ಪ್ರಾರಂಭಿಸಲು $50 ಮಿಲಿಯನ್‌ನಷ್ಟು ಸ್ವಂತ ಹಣವನ್ನು ಹೂಡಿಕೆ ಮಾಡಿದರು. Signal ಫೌಂಡೇಶನ್ ಎಂಬುದು ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಖಾಸಗಿ ಸಂವಹನವನ್ನು ಪ್ರವೇಶಿಸಬಹುದಾದ, ಸುರಕ್ಷಿತ ಮತ್ತು ಸರ್ವತ್ರವಾಗಿಸುವ ನಿಟ್ಟಿನಲ್ಲಿ ಅಡಿಪಾಯ ಹಾಕುವ ಕಾರ್ಯವನ್ನು ಮಾಡಲು ಮುಡಿಪಾಗಿದೆ.
WhatsApp ಮತ್ತು Signal ಫೌಂಡೇಶನ್ ಅನ್ನು ಸ್ಥಾಪಿಸುವ ಮುನ್ನ, ಆಕ್ಟನ್ ಅವರು Apple, Yahoo ಮತ್ತು Adobe ನಂತಹ ಕಂಪನಿಗಳಲ್ಲಿ 25 ಕ್ಕೂ ಹೆಚ್ಚು ವರ್ಷಗಳ ಕಾಲ ಸಾಫ್ಟ್‌ವೇರ್ ಬಿಲ್ಡರ್ ಆಗಿ ಕಾರ್ಯನಿರ್ವಹಿಸಿದ್ದರು.
ಜೇ ಅವರು ಗ್ರಾಹಕ ತಂತ್ರಜ್ಞಾನದಲ್ಲಿ ಹಿರಿಯ ಉತ್ಪನ್ನ ಮತ್ತು ಇಂಜಿನಿಯರಿಂಗ್ ನಾಯಕತ್ವದ ಪಾತ್ರಗಳಲ್ಲಿ ವ್ಯಾಪಕ ಹಿನ್ನೆಲೆಯೊಂದಿಗಿನ ಪ್ರಾಡಕ್ಟ್ ಬಿಲ್ಡರ್ ಆಗಿದ್ದಾರೆ. ತೀರಾ ಇತ್ತೀಚೆಗೆ, Twitter ನ ಗ್ರಾಹಕ ಮತ್ತು ಆದಾಯ ಉತ್ಪನ್ನಗಳ ಜನರಲ್ ಮ್ಯಾನೇಜರ್ ಆಗಿದ್ದ ಅವರು ಇಂಜಿನಿಯರಿಂಗ್, ಉತ್ಪನ್ನ, ವಿನ್ಯಾಸ, ಸಂಶೋಧನೆ ಮತ್ತು ಡೇಟಾ ವಿಜ್ಞಾನವನ್ನು ಮುನ್ನಡೆಸಿದ್ದರು. Twitter ಗಿಂತ ಮುನ್ನ ಜೇ ಅವರು Facebook ನಲ್ಲಿದ್ದರು, ಅಲ್ಲಿ ರಿಯಾಲಿಟಿ ಲ್ಯಾಬ್ಸ್ AI ಅಸಿಸ್ಟೆಂಟ್‌ನ ಅಭಿವೃದ್ಧಿಯನ್ನು ಮುನ್ನಡೆಸಿದ್ದರು ಮತ್ತು Messenger ಮತ್ತು Instagram Directಲನ ಗೌಪ್ಯತೆ, ಸಮಗ್ರತೆ ಹಾಗೂ ಸಿಸ್ಟಮ್ಸ್ ಉತ್ಪನ್ನ ತಂಡಗಳನ್ನು ಮುನ್ನಡೆಸಿದ್ದರು. ಜೇ ಅವರು Mozilla ದಲ್ಲಿ ಉತ್ಪನ್ನದ SVP ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದರು, ಅಲ್ಲಿ ಅವರು Firefox ನ ಆರಂಭದ ದಿನಗಳಲ್ಲಿ ಪ್ರಮುಖ ಆವೃತ್ತಿಗಳನ್ನು ಮುನ್ನಡೆಸಿದ್ದರು ಮತ್ತು ವೆಬ್ ಪ್ಲಾಟ್‌ಫಾರ್ಮ್‌ನ ಪ್ರಚಾರಕರಾಗಿದ್ದರು ಹಾಗೂ ಜನರಿಗೆ ಹೆಚ್ಚು ಆಯ್ಕೆಗಳು ಮತ್ತು ಕಂಟ್ರೋಲ್ ಆನ್‌ಲೈನ್ ಅನ್ನು ಒದಗಿಸಿದ್ದರು.
ಜೇ ಅವರು ಸ್ಟಾರ್ಟ್ ಅಪ್‌ನ ಸಂಸ್ಥಾಪಕರೂ ಆಗಿದ್ದರು, ಮತ್ತು ತಮ್ಮ ವೃತ್ತಿಜೀವನದ ಆರಂಭದ ಅವಧಿಯನ್ನು Firefly Network (Microsoft ಖರೀದಿಸಿತು) ಮತ್ತು Oracle ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಇಂಜಿನಿಯರಿಂಗ್ ಮ್ಯಾನೇಜರ್ ಆಗಿದ್ದರು.
ಜೇ ಅವರು ಯಾಲೇ ಕಾಲೇಜ್‌ನಿಂದ ಅನ್ವಯಿಕ ಗಣಿತಶಾಸ್ತ್ರದಲ್ಲಿ ಬಿ.ಎಸ್. ಪೂರೈಸಿದ್ದಾರೆ ಹಾಗೂ ಯುನೈಟೆಡ್ ಸ್ಟೇಟ್ಸ್‌ನ ಅನೇಕ ಪೇಟೆಂಟ್‌ಗಳ ಸಹಸಂಶೋಧಕರಾಗಿದ್ದಾರೆ.
ಕ್ಯಾಥರೀನ್ ಮಹರ್ ಅವರು Wikipedia ದ ಜವಾಬ್ದಾರಿಯನ್ನು ಹೊಂದಿರುವ Wikimedia ಫೌಂಡೇಶನ್‌ನ ಮಾಜಿ ಸಿಇಒ ಮತ್ತು ಕಾರ್ಯಕಾರಿ ನಿರ್ದೇಶಕರಾಗಿದ್ದರು. ಆಕೆ ಪ್ರಸ್ತುತ ಅಟ್ಲಾಂಟಿಕ್ ಕೌನ್ಸಿಲ್‌ನಲ್ಲಿ ಅನಿವಾಸಿ ಹಿರಿಯ ಸಹವರ್ತಿಯಾಗಿದ್ದಾರೆ, ಅಲ್ಲಿ ತಂತ್ರಜ್ಞಾನದ ರೂಪಾಂತರ, ಮಾನವ ಹಕ್ಕುಗಳು ಮತ್ತು ಪ್ರಜಾತಂತ್ರದ ಮೇಲೆ ಕೇಂದ್ರೀಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. Wikimedia ಗಿಂತ ಮುನ್ನ, ಆಕೆ Access Now ಎಂಬ ಡಿಜಿಟಲ್ ರೈಟ್ಸ್ ಸಂಸ್ಥೆಯ ಭವಿಷ್ಯದ ಕಾರ್ಯತಂತ್ರದ ನಿರ್ದೇಶಕರಾಗಿದ್ದರು. ಮಹರ್ ಅವರು ವಿಶ್ವ ಆರ್ಥಿಕ ವೇದಿಕೆಯಾದ Young Global Leader ನ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್‌ನ ಸದಸ್ಯರಾಗಿದ್ದಾರೆ ಮತ್ತು ಟ್ರೂಮನ್ ನ್ಯಾಶನಲ್ ಸೆಕ್ಯೂರಿಟಿ ಪ್ರಾಜೆಕ್ಟ್‌ನ ಸೆಕ್ಯೂರಿಟಿ ಸಹವರ್ತಿಯಾಗಿದ್ದಾರೆ. ಆಕೆ ಸೆಂಟರ್ ಫಾರ್ ಟೆಕ್ನಾಲಜಿ ಆಂಡ್ ಡೆಮಾಕ್ರೆಸಿ, ಕನ್‌ಸ್ಯೂಮರ್ ರಿಪೋರ್ಟ್ಸ್, ದಿ ಡಿಜಿಟಲ್ ಪಬ್ಲಿಕ್ ಲೈಬ್ರೆರಿ ಆಫ್ ಅಮೆರಿಕಾ, ಅಡ್ವೆಂಚರ್ ಸೈಂಟಿಸ್ಟ್ಸ್ ಮತ್ತು System.com ನ ಆಡಳಿತ ಮಂಡಳಿ ನಿರ್ದೇಶಕರಾಗಿದ್ದಾರೆ. ಇದರೊಂದಿಗೆ ಅಮೆರಿಕನ್ ಯುನಿವರ್ಸಿಟಿ ಆಫ್ ಬೈರುತ್‌ನ ಟ್ರಸ್ಟಿಯೂ ಹೌದು. ಸ್ಟೇಟ್ಸ್‌ನ ವಿದೇಶಾಂಗ ವ್ಯವಹಾರಗಳ ನೀತಿ ಮಂಡಳಿಯ ಯು.ಎಸ್. ಇಲಾಖೆಗೆ ನಿಯುಕ್ತಿಗೊಂಡ ನಿರ್ದೇಶಕರಾಗಿದ್ದು, ಅಲ್ಲಿ ತಂತ್ರಜ್ಞಾನ ನೀತಿಯ ಕುರಿತು ಸ್ಟೇಟ್ ಸೆಕ್ರೆಟರಿಗೆ ಸಲಹೆ ನೀಡುತ್ತಾರೆ. ಆಕೆ ಮಿಡ್ಲ್ ಈಸ್ಟರ್ನ್ ಆಂಡ್ ಇಸ್ಲಾಮಿಕ್ ಸ್ಟಡೀಸ್‌ನಲ್ಲಿ 2005 ರಲ್ಲಿ ನ್ಯೂಯಾರ್ಕ್ ಯುನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಸೈನ್ಸ್‌ನಿಂದ ಪದವಿ ಪಡೆದಿದ್ದಾರೆ. ಇದಕ್ಕೂ ಮುನ್ನ ಈಜಿಪ್ಟ್‌ನ ಕೈರೋದ ಅರೇಬಿಕ್ ಲ್ಯಾಂಗ್ವೇಜ್ ಇನ್‌ಸ್ಟಿಟ್ಯೂಟ್ ಆಫ್ ದಿ ಅಮೆರಿಕನ್ ಯುನಿವರ್ಸಿಟಿಯಲ್ಲಿ ಹಾಗೂ ಸಿರಿಯಾದ ಡಮಾಸ್ಕಸ್‌ನ Institut français d'études arabes de Damas (L'IFEAD) ನಲ್ಲಿ ಅಧ್ಯಯನ ನಡೆಸಿದ್ದರು.
ಮೆರೆಡಿತ್ ವಿಟೇಕರ್ ಅವರು Signal ನ ಅಧ್ಯಕ್ಷರು ಹಾಗೂ Signal ಫೌಂಡೇಶನ್‌ನ ನಿರ್ದೇಶಕ ಮಂಡಳಿಯ ಸದಸ್ಯರೂ ಆಗಿದ್ದಾರೆ.
ಅವರು ಟೆಕ್, ಸ್ಪಾನಿಂಗ್ ಉದ್ಯಮ, ಶೈಕ್ಷಣಿಕ ಮತ್ತು ಸರ್ಕಾರಿ ಕ್ಷೇತ್ರಗಳಲ್ಲಿ 17 ವರ್ಷಗಳ ಅನುಭವ ಹೊಂದಿದ್ದಾರೆ. Signal ಗೆ ಅಧ್ಯಕ್ಷರಾಗಿ ಸೇರುವ ಮುನ್ನ, ಅವರು NYU ನಲ್ಲಿ ಮಿಂಡೆರೂ ರಿಸರ್ಚ್ ಪ್ರೊಫೆಸರ್ ಆಗಿದ್ದರು ಹಾಗೂ ತಾವೇ ಸಹಸಂಸ್ಥಾಪಿಸಿದ ಎಐ ನೌ ಇನ್‌ಸ್ಟಿಟ್ಯೂಟ್‌ನಲ್ಲಿ ಫ್ಯಾಕಲ್ಟಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಸಂಶೋಧನೆ ಮತ್ತು ಪಾಂಡಿತ್ಯಪೂರ್ಣ ಕಾರ್ಯವು ಜಾಗತಿಕ ಎಐ ನೀತಿಯನ್ನು ರೂಪಿಸಲು ನೆರವಾಯಿತು ಮತ್ತು ಆಧುನಿಕ ಎಐಗೆ ಅಗತ್ಯವಿರುವ ಕಣ್ಗಾವಲು ಉದ್ಯಮ ಅಭ್ಯಾಸಗಳು ಮತ್ತು ಕೈಗಾರಿಕಾ ಸಂಪನ್ಮೂಲಗಳ ಸಾಂದ್ರತೆಯನ್ನು ಉತ್ತಮವಾಗಿ ಗುರುತಿಸಲು AI ಮೇಲಿನ ಸಾರ್ವಜನಿಕ ನಿರೂಪಣೆಯನ್ನು ಬದಲಾಯಿಸಿತು. NYU ಗಿಂತ ಮೊದಲು, ಅವರು ಒಂದು ದಶಕಕ್ಕೂ ಹೆಚ್ಚು ಕಾಲ Googleನಲ್ಲಿ ಕೆಲಸ ಮಾಡಿದರು, ಅಲ್ಲಿ ಅವರು ಉತ್ಪನ್ನ ಮತ್ತು ಎಂಜಿನಿಯರಿಂಗ್ ತಂಡಗಳನ್ನು ಮುನ್ನಡೆಸಿದರು, Googleನ ಓಪನ್ ರಿಸರ್ಚ್ ಗ್ರೂಪ್ ಅನ್ನು ಸ್ಥಾಪಿಸಿದರು ಮತ್ತು ಜಾಗತಿಕವಾಗಿ ವಿತರಿಸಲಾದ ನೆಟ್‌ವರ್ಕ್ ಮಾಪನ ವೇದಿಕೆಯಾದ M-Lab ಅನ್ನು ಸಹ-ಸಂಸ್ಥಾಪಿಸಿದರು, ಅದು ಈಗ ಇಂಟರ್ನೆಟ್ ಕಾರ್ಯಕ್ಷಮತೆಯಲ್ಲಿ ವಿಶ್ವದ ಅತಿದೊಡ್ಡ ಮುಕ್ತ ಮೂಲ ದತ್ತಾಂಶವನ್ನು ಒದಗಿಸುತ್ತದೆ. Google ನಲ್ಲಿ ಸಂಘಟನೆಯ ನೇತೃತ್ವಕ್ಕೆ ಅವರು ಸಹಾಯ ಮಾಡಿದರು. ಅವರು AI ಮತ್ತು ಅದರ ಹಾನಿಗಳ ಬಗ್ಗೆ ಕಾಳಜಿಗೆ ಕಂಪನಿಯ ಪ್ರತಿಸ್ಪಂದನೆಯ ಕೊರತೆಯ ವಿರುದ್ಧ ಹೋರಾಡುವಲ್ಲಿ ಪ್ರಮುಖ ಸಂಘಟಕರಲ್ಲಿ ಒಬ್ಬರಾಗಿದ್ದರು ಮತ್ತು Google Walkout ನ ಕೇಂದ್ರ ಸಂಘಟಕರಾಗಿದ್ದರು. ಅವರು ವೈಟ್ ಹೌಸ್, ಎಫ್‌ಸಿಸಿ, ನ್ಯೂಯಾರ್ಕ್ ನಗರ, ಯುರೋಪಿಯನ್ ಪಾರ್ಲಿಮೆಂಟ್ ಹಾಗೂ ಇನ್ನೂ ಅನೇಕ ಸರ್ಕಾರಗಳು ಹಾಗೂ ನಾಗರಿಕ ಸಮಾಜ ಸಂಘಟನೆಗಳಿಗೆ ಗೌಪ್ಯತೆ, ಸುರಕ್ಷತೆ, ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ನೀತಿ ಹಾಗೂ ಮಾಪನದ ಕುರಿತು ಸಲಹೆ ನೀಡಿದ್ದಾರೆ. ಅಲ್ಲದೆ, ಅವರು ಇತ್ತೀಚೆಗೆ ಯುಎಸ್ ಫೆಡರಲ್ ಟ್ರೇಡ್ ಕಮಿಶನ್‌ನಲ್ಲಿ ಅಧ್ಯಕ್ಷರಿಗೆ ಎಐ ಕುರಿತ ಹಿರಿಯ ಸಲಹೆಗಾರರಾಗಿ ಅವಧಿ ಪೂರೈಸಿದರು.
ಮಾಕ್ಸಿ ಮಾರ್ಲಿನ್‌ಸ್ಪೈಕ್ ಅವರು Signal ನ ಸಂಸ್ಥಾಪಕರಾಗಿದ್ದಾರೆ.