ಮುಕ್ತ ಅಭಿವ್ಯಕ್ತಿಯನ್ನು ರಕ್ಷಿಸುವ ಮತ್ತು ಸುರಕ್ಷಿತ ಜಾಗತಿಕ ಸಂವಹನವನ್ನು ಸಕ್ರಿಯಗೊಳಿಸುವ ಮುಕ್ತ ಮೂಲದ ಗೌಪ್ಯತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

ನಮ್ಮ ಗುರಿ

ಮುಕ್ತ ಅಭಿವ್ಯಕ್ತಿಯನ್ನು ರಕ್ಷಿಸುವ ಮತ್ತು ಸುರಕ್ಷಿತ ಜಾಗತಿಕ ಸಂವಹನವನ್ನು ಸಕ್ರಿಯಗೊಳಿಸುವ ಮುಕ್ತ ಮೂಲದ ಗೌಪ್ಯತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು.

ಗೌಪ್ಯತೆಗೆ ಪ್ರಾಧಾನ್ಯತೆ

ನಮ್ಮ ಪ್ರಮುಖ ಉತ್ಪನ್ನ, Signal ಮೆಸೆಂಜರ್‌ನೊಂದಿಗೆ, ನಾವು ಬಳಕೆದಾರರ ಗೌಪ್ಯತೆಯನ್ನು ಗೆಲ್ಲುವುದು ಎಂದರೆ ನಿಮ್ಮ ಡೇಟಾವನ್ನು "ಜವಾಬ್ದಾರಿಯಿಂದ" ನಿರ್ವಹಿಸುವುದಕ್ಕಿಂತಲೂ ಹೆಚ್ಚಾಗಿ, ನಾವೇ ಸೇರಿದಂತೆ ಯಾರ ಕೈಗೂ ಸಿಗದಂತೆ ನೋಡಿಕೊಳ್ಳುವುದು ಎಂದು ನಾವು ನಂಬುತ್ತೇವೆ.

ಮುಕ್ತ ಮೂಲ

ಮುಕ್ತ ಮೂಲ ಸಮುದಾಯದ ಬದ್ಧ ಸದಸ್ಯರಾಗಿ, ನಾವು ನಮ್ಮ ತಂತ್ರಜ್ಞಾನವನ್ನು ಪ್ರಕಟಿಸುತ್ತೇವೆ ಮತ್ತು ಇತರ ಕಂಪನಿಗಳು ತಮ್ಮ ಸ್ವಂತ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಅದನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಜ್ಞಾನವನ್ನು ಹಂಚಿಕೊಳ್ಳುತ್ತೇವೆ.

ಲಾಭರಹಿತ

Signal ಫೌಂಡೇಶನ್ ಒಂದು 501c3 ಲಾಭರಹಿತ ಸಂಸ್ಥೆಯಾಗಿದೆ. ನಾವು ಆ ಪದನಾಮದ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ಲಾಭರಹಿತ ಸಂಸ್ಥೆ ಕೂಡಾ ಲಾಭೋದ್ದೇಶದಿಂದ ನಡೆಸಲ್ಪಡುವ ಯಾವುದೇ ವ್ಯಾಪಾರದಂತೆಯೇ ನಾವೀನ್ಯತೆ ಮತ್ತು ಗಾತ್ರದಲ್ಲಿ ಸ್ಪರ್ಧೆಯೊಡ್ಡಬಹುದು ಎಂಬುದನ್ನು ಸಾಬೀತುಪಡಿಸಲು ನಾವು ಹೊರಟಿದ್ದೇವೆ.

ಫೌಂಡೇಶನ್ + LLC ರಚನೆ ಯಾಕೆ?

ನಾವು Signal ಮೆಸೆಂಜರ್‌ನ ಮಾತೃಸಂಸ್ಥೆಯಾಗಿ Signal ಫೌಂಡೇಶನ್ ಅನ್ನು ರಚಿಸಿದ್ದೇವೆ, ಏಕೆಂದರೆ ಮುಂದೊಂದು ದಿನ ಒಂದೇ ಗುರಿಗೆ ಏರುವ ಗೌಪ್ಯತೆಯನ್ನು ಸಂರಕ್ಷಿಸುವ ಇತರ ಯೋಜನೆಗಳನ್ನು ಉತ್ತೇಜಿಸಲು ನಾವು ಬಯಸುತ್ತೇವೆ.

ಎಲ್ಲರಿಗೂ ಉಚಿತ

Signal ಮೆಸೆಂಜರ್‌ ಅನ್ನು ವಿಶ್ವದಾದ್ಯಂತ ಲಕ್ಷಾಂತರ ಮಂದಿಗೆ ಉಚಿತ ಆ್ಯಪ್ ಅನ್ನು ಒದಗಿಸಲು ಸಮುದಾಯದ ಬೆಂಬಲವನ್ನು ನಾವು ಅವಲಂಬಿಸಿದ್ದೇವೆ. ಈ ಉದ್ದೇಶವನ್ನು ನೀವು ಬೆಂಬಲಿಸುತ್ತೀರಾ?

ಫೌಂಡೇಶನ್ + LLC ರಚನೆ ಯಾಕೆ?

ನಾವು Signal ಮೆಸೆಂಜರ್‌ನ ಮಾತೃಸಂಸ್ಥೆಯಾಗಿ Signal ಫೌಂಡೇಶನ್ ಅನ್ನು ರಚಿಸಿದ್ದೇವೆ, ಏಕೆಂದರೆ ಮುಂದೊಂದು ದಿನ ಒಂದೇ ಗುರಿಗೆ ಏರುವ ಗೌಪ್ಯತೆಯನ್ನು ಸಂರಕ್ಷಿಸುವ ಇತರ ಯೋಜನೆಗಳನ್ನು ಉತ್ತೇಜಿಸಲು ನಾವು ಬಯಸುತ್ತೇವೆ.

ಎಲ್ಲರಿಗೂ ಉಚಿತ

Signal ಮೆಸೆಂಜರ್‌ ಅನ್ನು ವಿಶ್ವದಾದ್ಯಂತ ಲಕ್ಷಾಂತರ ಮಂದಿಗೆ ಉಚಿತ ಆ್ಯಪ್ ಅನ್ನು ಒದಗಿಸಲು ಸಮುದಾಯದ ಬೆಂಬಲವನ್ನು ನಾವು ಅವಲಂಬಿಸಿದ್ದೇವೆ. ಈ ಉದ್ದೇಶವನ್ನು ನೀವು ಬೆಂಬಲಿಸುತ್ತೀರಾ?

ಆಡಳಿತ ಮಂಡಳಿಯ ಸದಸ್ಯರು

ಬ್ರಿಯಾನ್ ಆಕ್ಟನ್ ಅವರ ಭಾವಚಿತ್ರ

Brian Acton

ಬ್ರಿಯಾನ್ ಆಕ್ಟನ್ ಅವರೊಬ್ಬ ಉದ್ಯಮಿ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ಆಗಿದ್ದು, 2009ರಲ್ಲಿ ಮೆಸೇಜಿಂಗ್ ಆ್ಯಪ್ WhatsApp ಅನ್ನು ಸಹಸಂಸ್ಥಾಪಿಸಿದ್ದರು. 2014ರಲ್ಲಿ ಆ ಆ್ಯಪ್ Facebook ಗೆ ಮಾರಾಟಗೊಂಡ ಬಳಿಕ, ಗ್ರಾಹಕ ದತ್ತಾಂಶ ಬಳಕೆ ಮತ್ತು ಉದ್ದೇಶಿತ ಜಾಹೀರಾತಿನ ಕುರಿತು ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ಲಾಭರಹಿತ ಉದ್ಯಮದತ್ತ ತಮ್ಮ ಪ್ರಯತ್ನಕ್ಕಾಗಿ ಗಮನಹರಿಸಲು ಅವರು ಆ ಕಂಪನಿ ತೊರೆದರು. 2018ರ ಫೆಬ್ರವರಿಯಲ್ಲಿ, ಆಕ್ಟನ್ ಅವರು ಮಾಕ್ಸಿ ಮಾರ್ಲಿನ್‌ಸ್ಪೈಕ್ ಅವರೊಂದಿಗೆ ಸೇರಿಕೊಂಡು Signal ಫೌಂಡೇಶನ್ ಅನ್ನು ಪ್ರಾರಂಭಿಸಲು $50 ಮಿಲಿಯನ್‌ನಷ್ಟು ಸ್ವಂತ ಹಣವನ್ನು ಹೂಡಿಕೆ ಮಾಡಿದರು. Signal ಫೌಂಡೇಶನ್ ಎಂಬುದು ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಖಾಸಗಿ ಸಂವಹನವನ್ನು ಪ್ರವೇಶಿಸಬಹುದಾದ, ಸುರಕ್ಷಿತ ಮತ್ತು ಸರ್ವತ್ರವಾಗಿಸುವ ನಿಟ್ಟಿನಲ್ಲಿ ಅಡಿಪಾಯ ಹಾಕುವ ಕಾರ್ಯವನ್ನು ಮಾಡಲು ಮುಡಿಪಾಗಿದೆ.

WhatsApp ಮತ್ತು Signal ಫೌಂಡೇಶನ್ ಅನ್ನು ಸ್ಥಾಪಿಸುವ ಮುನ್ನ, ಆಕ್ಟನ್ ಅವರು Apple, Yahoo ಮತ್ತು Adobe ನಂತಹ ಕಂಪನಿಗಳಲ್ಲಿ 25 ಕ್ಕೂ ಹೆಚ್ಚು ವರ್ಷಗಳ ಕಾಲ ಸಾಫ್ಟ್‌ವೇರ್ ಬಿಲ್ಡರ್ ಆಗಿ ಕಾರ್ಯನಿರ್ವಹಿಸಿದ್ದರು.

ಮಾಕ್ಸಿ ಮಾರ್ಲಿನ್‌ಸ್ಪೈಕ್ ಅವರ ಭಾವಚಿತ್ರ

Moxie Marlinspike

ಮಾಕ್ಸಿ ಮಾರ್ಲಿನ್‌ಸ್ಪೈಕ್ ಅವರು Signal ನ ಸಂಸ್ಥಾಪಕರಾಗಿದ್ದಾರೆ.

ಮೆರೆಡಿತ್ ವಿಟೇಕರ್ ಅವರ ಭಾವಚಿತ್ರ

Meredith Whittaker

ಮೆರೆಡಿತ್ ವಿಟೇಕರ್ ಅವರು Signal ನ ಅಧ್ಯಕ್ಷರು ಹಾಗೂ Signal ಫೌಂಡೇಶನ್‌ನ ನಿರ್ದೇಶಕ ಮಂಡಳಿಯ ಸದಸ್ಯರೂ ಆಗಿದ್ದಾರೆ.

ಅವರು ಟೆಕ್, ಸ್ಪಾನಿಂಗ್ ಉದ್ಯಮ, ಶೈಕ್ಷಣಿಕ ಮತ್ತು ಸರ್ಕಾರಿ ಕ್ಷೇತ್ರಗಳಲ್ಲಿ 17 ವರ್ಷಗಳ ಅನುಭವ ಹೊಂದಿದ್ದಾರೆ. Signal ಗೆ ಅಧ್ಯಕ್ಷರಾಗಿ ಸೇರುವ ಮುನ್ನ, ಅವರು NYU ನಲ್ಲಿ ಮಿಂಡೆರೂ ರಿಸರ್ಚ್ ಪ್ರೊಫೆಸರ್ ಆಗಿದ್ದರು ಹಾಗೂ ತಾವೇ ಸಹಸಂಸ್ಥಾಪಿಸಿದ ಎಐ ನೌ ಇನ್‌ಸ್ಟಿಟ್ಯೂಟ್‌ನಲ್ಲಿ ಫ್ಯಾಕಲ್ಟಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಸಂಶೋಧನೆ ಮತ್ತು ಪಾಂಡಿತ್ಯಪೂರ್ಣ ಕಾರ್ಯವು ಜಾಗತಿಕ ಎಐ ನೀತಿಯನ್ನು ರೂಪಿಸಲು ನೆರವಾಯಿತು ಮತ್ತು ಆಧುನಿಕ ಎಐಗೆ ಅಗತ್ಯವಿರುವ ಕಣ್ಗಾವಲು ಉದ್ಯಮ ಅಭ್ಯಾಸಗಳು ಮತ್ತು ಕೈಗಾರಿಕಾ ಸಂಪನ್ಮೂಲಗಳ ಸಾಂದ್ರತೆಯನ್ನು ಉತ್ತಮವಾಗಿ ಗುರುತಿಸಲು AI ಮೇಲಿನ ಸಾರ್ವಜನಿಕ ನಿರೂಪಣೆಯನ್ನು ಬದಲಾಯಿಸಿತು. NYU ಗಿಂತ ಮೊದಲು, ಅವರು ಒಂದು ದಶಕಕ್ಕೂ ಹೆಚ್ಚು ಕಾಲ Google‌ನಲ್ಲಿ ಕೆಲಸ ಮಾಡಿದರು, ಅಲ್ಲಿ ಅವರು ಉತ್ಪನ್ನ ಮತ್ತು ಎಂಜಿನಿಯರಿಂಗ್ ತಂಡಗಳನ್ನು ಮುನ್ನಡೆಸಿದರು, Google‌ನ ಓಪನ್ ರಿಸರ್ಚ್ ಗ್ರೂಪ್ ಅನ್ನು ಸ್ಥಾಪಿಸಿದರು ಮತ್ತು ಜಾಗತಿಕವಾಗಿ ವಿತರಿಸಲಾದ ನೆಟ್‌ವರ್ಕ್ ಮಾಪನ ವೇದಿಕೆಯಾದ M-Lab ಅನ್ನು ಸಹ-ಸಂಸ್ಥಾಪಿಸಿದರು, ಅದು ಈಗ ಇಂಟರ್ನೆಟ್ ಕಾರ್ಯಕ್ಷಮತೆಯಲ್ಲಿ ವಿಶ್ವದ ಅತಿದೊಡ್ಡ ಮುಕ್ತ ಮೂಲ ದತ್ತಾಂಶವನ್ನು ಒದಗಿಸುತ್ತದೆ. Google ನಲ್ಲಿ ಸಂಘಟನೆಯ ನೇತೃತ್ವಕ್ಕೆ ಅವರು ಸಹಾಯ ಮಾಡಿದರು. ಅವರು AI ಮತ್ತು ಅದರ ಹಾನಿಗಳ ಬಗ್ಗೆ ಕಾಳಜಿಗೆ ಕಂಪನಿಯ ಪ್ರತಿಸ್ಪಂದನೆಯ ಕೊರತೆಯ ವಿರುದ್ಧ ಹೋರಾಡುವಲ್ಲಿ ಪ್ರಮುಖ ಸಂಘಟಕರಲ್ಲಿ ಒಬ್ಬರಾಗಿದ್ದರು ಮತ್ತು Google Walkout ನ ಕೇಂದ್ರ ಸಂಘಟಕರಾಗಿದ್ದರು. ಅವರು ವೈಟ್ ಹೌಸ್, ಎಫ್‌ಸಿಸಿ, ನ್ಯೂಯಾರ್ಕ್ ನಗರ, ಯುರೋಪಿಯನ್ ಪಾರ್ಲಿಮೆಂಟ್ ಹಾಗೂ ಇನ್ನೂ ಅನೇಕ ಸರ್ಕಾರಗಳು ಹಾಗೂ ನಾಗರಿಕ ಸಮಾಜ ಸಂಘಟನೆಗಳಿಗೆ ಗೌಪ್ಯತೆ, ಸುರಕ್ಷತೆ, ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ನೀತಿ ಹಾಗೂ ಮಾಪನದ ಕುರಿತು ಸಲಹೆ ನೀಡಿದ್ದಾರೆ. ಅಲ್ಲದೆ, ಅವರು ಇತ್ತೀಚೆಗೆ ಯುಎಸ್ ಫೆಡರಲ್ ಟ್ರೇಡ್ ಕಮಿಶನ್‌ನಲ್ಲಿ ಅಧ್ಯಕ್ಷರಿಗೆ ಎಐ ಕುರಿತ ಹಿರಿಯ ಸಲಹೆಗಾರರಾಗಿ ಅವಧಿ ಪೂರೈಸಿದರು.